ಕನ್ನಡ ಕಲಿಯೋಣಕ್ಕೆ ಸುಸ್ವಾಗತ

2023-24 Registration

ಕನ್ನಡ ಕಲಿಯೋಣ ಸಂದೇಶ:
ನಮ್ಮ ನೆಚ್ಚಿನ ಕನ್ನಡ ಭಾಷೆಯನ್ನು ನಮ್ಮ ಅಮೇರಿಕನ್ನಡ ಮಕ್ಕಳು ಕಲಿತು ತಮ್ಮ ಭಾಷಾಭಿಮಾನ ಮತ್ತು ಜ್ಞಾನ ವನ್ನು ಬೆಳೆಸಿಕೊಳ್ಳುವುದಲ್ಲದೆ ತಮ್ಮ ತಂದೆ, ತಾಯಿ, ಬಂಧು, ಬಳಗ ಎಲ್ಲರೊಡನೆ ಮಾತನಾಡಲಿ ಎನ್ನುವ ಸದುದ್ದೇಶದಿಂದ ಹಾಗು ಕಾವೇರಿ ಕನ್ನಡ ಸಂಘ ಪ್ರೋತ್ಸಾಹದಿಂದ ೨೦೦೮ ರಲ್ಲಿ ಮೇರಿಲ್ಯಾಂಡ್ ಮತ್ತು ವರ್ಜೀನಿಯ ದಲ್ಲಿ ಪ್ರಾರಂಭಿಸಿದ ಒಂದು ಅತ್ಯುನ್ನತ ಕಾರ್ಯಕ್ರಮ ಕನ್ನಡ ಕಲಿಯೋಣ.ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಜವಾಬ್ಧಾರಿ ನಮ್ಮೆಲರದು ಆದರೂ ಸಮಯದ ಮತ್ತು ಸ್ಪೂರ್ತಿಯ ಅಭಾವದಿಂದ ಹಲವಾರು ಕನ್ನಡಿಗರು ಈ ಜವಾಬ್ಧಾರಿಯನ್ನು ಪೂರ್ಣಗೊಳಿಸಲು ಕಷ್ಟಪಡುತ್ತಾರೆ. ಇವರಿಗೆ ಸಹಾಯ ಮಾಡಲು ಪ್ರಾರಂಭಿಸಿದ ಈ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ ಪ್ರತಿ ವರ್ಷ ಹಲವಾರು ಮಕ್ಕಳು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮ ಮೇರಿಲ್ಯಾಂಡ್ ಮತ್ತು ವರ್ಜೀನಿಯ ದಲ್ಲಿ ಹಲವಾರು ಕೇಂದ್ರಗಳಲ್ಲಿ ಪ್ರತಿವಾರ ಒಂದು ದಿವಸ ನಿಗದಿತ ಸ್ಥಳ, ಸಮಯದಲ್ಲಿ ನಡೆಯುತ್ತದೆ. Covid ಮಹಾಮಾರಿಯ ಮುಂಚೆ ಪ್ರತಿವಾರ ವರ್ಜೀನಿಯಾ ದ ಹರೆಂಡನ್ , ಫೇರ್ ಫ್ಯಾಕ್ಸ್, ಸೌತ್ ರೈಡಿಂಗ್ ಮತ್ತು ಮೇರಿಲ್ಯಾಂಡ್ ನ ಗೇತರಸ ಬರ್ಗ ನಲ್ಲಿ ಕನ್ನಡ ಕಲಿಯೋಣ ಕಾರ್ಯಕ್ರಮ ನಡೆಯುತಿತ್ತು. 2020, 2021 ವರ್ಷಗಳಲ್ಲಿ, Covid ಕಾರಣದಿಂದ, ಕಾರ್ಯಕ್ರಮ ಸಂಪೂರ್ಣವಾಗಿ ಆನ್ಲೈನ್ ಆಯಿತು. ಎಲ್ಲ ಮಕ್ಕಳು ಮತ್ತು ಶಿಕ್ಷಕರು ಆನ್‌ಲೈನ್‌ಗೆ ಯಶಸ್ವಿಯಾಗಿ ಪರಿವರ್ತನೆಯಾಗಿ ಕಾರ್ಯಕ್ರಮವನ್ನು ಮುಂದುವರೆಸಿದರು . 2022-2023 ನಲ್ಲಿ, Covid ನಂತರ ಅನೇಕ ಮಕ್ಕಳ, ಪೋಷಕರ, ಶಿಕ್ಷಕರ ಇಚ್ಛೆಯಂತೆ ಆನ್ಲೈನ್ ನಲ್ಲಿ ಪಾಠ ಹೇಳಿಕೊಡುವದು ಹಾಗೇ ಮುಂದೆವರೆಯಿತು, ಸೌತ ರೈಡಿಂಗ್ ನಲ್ಲಿ ಚಿಕ್ಕ ಮಕ್ಕಳಿಗೆ ಮುಖಾ ಮುಖಿಯಾಗಿ ತರಗತಿಗಳನ್ನು ನಡೆಸಲಾಯಿತು.

ಕನ್ನಡ ಕಲಿಸುವ ವಿಧಾನ:
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಠ್ಯಕ್ರಮವನ್ನು ಮೂಲವಾಗಿ ಆಧರಿಸಿಕೊಂಡು ಕನ್ನಡ ಕಲಿಯೋಣ ಕಾರ್ಯಕ್ರಮದ ಪ್ರಮುಖ ಶಿಕ್ಷಕರು ತಮ್ಮದೇ ಆದ ಒಂದು ಪಠ್ಯಕ್ರಮವನ್ನು ಅನುಸರಿಸುತ್ತಿದ್ದಾರೆ. ಆರಂಭದ ವರ್ಗಗಳಾದ ವರ್ಣಮಾಲೆಯಿಂದ ಹಿಡಿದು ಐದನೇ ತರಗತಿಯವರೆಗೂ ಪ್ರತಿ ವರ್ಗದಲ್ಲಿಯೂ ಓದುವುದು, ಬರೆಯುವುದು, ಆ ವರ್ಗಕ್ಕೆ ಮತ್ತು ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಮಾತನಾಡುವುದನ್ನು ಕಲಿಯುವುದಲ್ಲದೆ ,ಕನ್ನಡದ ಉಚ್ಚಾರಣೆಯನ್ನು ಸರಿಯಾದ ರೀತಿಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಇದಲ್ಲದೆ ಹೊಸ ಹೊಸ ಪದ್ಯ, ಹಾಡು, ಕಥೆಗಳ ಮೂಲಕ ಕರ್ನಾಟಕದ ಮತ್ತು ಕನ್ನಡಿಗರ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಉನ್ನತ ಜ್ಞಾನ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಾಂಭವಾಗಿ ಮುಂದಿನ ವರ್ಷ ಮೇ ವರೆಗೂ ಈ ಕಾರ್ಯಕ್ರಮ ಎರಡು ಹಂತದಲ್ಲಿ ನಡೆಯುತ್ತದೆ. ಪ್ರತಿವರ್ಷದ ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಎರಡು ಪರೀಕ್ಷೆಗಳು ಇರುವುದಲ್ಲದೆ, ವರ್ಷದ ಅಂತ್ಯದಲ್ಲಿ ಕನ್ನಡ ಭಾಷೆ, ನಾಡಿನ ಬಗ್ಗೆ ಹೆಚ್ಚು ಅರಿವು ಮೂಡಿಸಲು ವಾರ್ಷಿಕ ಸಂಶೋಧನೆ/ಯೋಜಿತ ಕಾರ್ಯ (ಪ್ರೊಜೆಕ್ಟ್ ವರ್ಕ್) ಸಹ ನೀಡಲಾಗುತ್ತದೆ ಮತ್ತು ಉತ್ತಮ ಸಂಶೋಧನೆ / ಯೋಜಿತ ಕಾರ್ಯವನ್ನು .ಪ್ರಶಂಸಿಸಿ ವರ್ಷದ ಅಂತ್ಯದ್ಲಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಪದವಿ ವಿತರಣೆ ಮತ್ತು ಪ್ರೊಜೆಕ್ಟ್ ವರ್ಕ್ ಬಹುಮಾನ ವಿತರಣೆ ಮಾಡಲಾಗುತ್ತದೆ. ಇದಲ್ಲದೆ ನಮ್ಮ ಕನ್ನಡ ಕಲಿಯೋಣ ಪುಟಾಣಿಗಳು ಕಾವೇರಿ ಆಶ್ರಯದಲ್ಲಿ ನಡೆಯುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕನ್ನಡ ಮಾತನಾಡುವ, ಕನ್ನಡದಲ್ಲಿ ಹಾಡು ಹೇಳುವ ಕಲೆಗಳನ್ನು ಪ್ರದರ್ಶಿಸಿ ಅನೇಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಿಮ್ಮ ಮಕ್ಕಳನ್ನು ಕನ್ನಡ ಕಲಿಯೋಣ ಕಾರ್ಯಕ್ರಮಕ್ಕೆ ಇಂದೇ ಸೇರಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ.
  • ಕನ್ನಡ ಕಲಿಯೋಣ ಶಿಕ್ಷಕರ ವೃಂದ kannadakaliyonateachers@googlegroups.com
  • kkshaale@gmail.com


  • The Kannada Kaliyona program was established in 2008 by the Kaveri Executive Committee with the help of volunteers to teach reading, writing and speaking Kannada to kids and adults. During Pre Covid years, the classes were held on the weekends in Fairfax County, Loudoun county & Montgomery county. During Covid the classes successfully transitioned to online classes and many kids continued their learning from wherever they were. With the success of online classes many kids continued online classes Post Covid, along with a couple of in-person classes for beginners during the 2022-23 school year in Loudoun county. Every year 70 to 85 kids enroll in the program and benefit from learning to read, write and speak in Kannada. The Kannada Kaliyona Program follows the Government of Karnataka prescribed syllabus for the classes.

    For more information please contact kkshaale@gmail.com or send an email to kannadakaliyona@googlegroups.com.